ಕೆರೆ ಮಣ್ಣು: ಜಿಪಂ ಸಿಇಒ ಬಂಧನಕ್ಕೆ ಕೋರ್ಟ್ ಆದೇಶ
Jan 08 2024, 01:45 AM ISTಭೂಮಿಯ ಮೇಲಿನ ಪ್ರತಿಯೊಂದು ಸಂಪತ್ತನ್ನು ರಕ್ಷಿಸುವ, ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಯಾ ಪ್ರದೇಶಗಳ ಸರ್ಕಾರಗಳು ಕಣ್ಣಾಗವಲಿಟ್ಟಿವೆ. ಹಾಗಿದ್ದರೂ, ಅಕ್ರಮಗಳು ಸಂಪೂರ್ಣ ನಿಯಂತ್ರಣವಾಗಲು ಸಾಧ್ಯವಿಲ್ಲ ಅನ್ನೋದಕ್ಕೆ ಶಿವಮೊಗ್ಗದ ಒಂದು ಪ್ರಕರಣ ಸಾಕ್ಷಿಯಾಗಿದೆ. ತಾಲೂಕಿನ ಅಬ್ಬಲಗೆರೆಯ ಮುದ್ದಣ್ಣನ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರನ್ನೇ ಬಂಧಿಸಿ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ನ್ಯಾಯಾಲಯ (ಡಿ.13ರಂದು) ಆದೇಶ ಹೊರಡಿಸಿದೆ.