ಲೋಕಸಭೆ ಚುನಾವಣೆ: ಮತಗಟ್ಟೆ ಅಧಿಕಾರಿಗಳ ಸಭೆ
Mar 23 2024, 01:00 AM ISTಮತ ಪಟ್ಟಿಯಲ್ಲಿರುವ 80 ವರ್ಷ ತುಂಬಿರುವ ವೃದ್ಧರು, ಬುದ್ದಿ ಮಾಂದ್ಯರು ಇತರೆ ನಡೆದಾಡಲು ಸಾಧ್ಯವಾಗದೆ ಮತಗಟ್ಟೆ ವರೆಗೆ ಬರಲಾಗದ ಮತದಾರರನ್ನು ಪರಿಶೀಲಿಸಿ, ಆಯಾ ಮತಗಟ್ಟೆಯ ಅಧಿಕಾರಿಗಳು ಅವರಿಗೆ ಮನೆಯಲ್ಲಿಯೇ ಮತ ಚಲಾಯಿಸಲು ಅವಕಾಶ ಮಾಡಬೇಕಾಗಿದೆ. ಒಂದು ವೇಳೆ ಮತಗಟ್ಟೆಗೆ ಬಂದು ಸ್ವತಃ ಅವರೇ ಮತ ಚಲಾಯಿಸುವವರಿದ್ದರೆ ಅವರಿಗೂ ಮತಗಟ್ಟೆಗೆ ಹೋಗುವ ವ್ಯವಸ್ಥೆ ಕಲ್ಪಿಸಲಾಗಿದೆ.