ಅಕ್ರಮ ಅಡ್ಡೆಗಳ ಮೇಲೆ ದಾಳಿ: 8 ಸಿಲಿಂಡರ್ ವಶ
Dec 05 2024, 12:31 AM ISTವಿಜಯಪುರ: ನಗರದ ಇಬ್ರಾಹಿಂ ರೋಜಾ, ಸಾಯಿ ಪಾರ್ಕ್, ಬಂಜಾರಾ ಕ್ರಾಸ್ ಸೇರಿದಂತೆ ವಿವಿಧೆಡೆ ಅನಧಿಕೃತ ಅಡ್ಡೆಗಳ ಮೇಲೆ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು 8 ಗೃಹೋಪಯೋಗಿ ಎಲ್ಪಿಜಿ ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದ್ದಾರೆ. ಗೃಹೋಪಯೋಗಿ ಸಿಲಿಂಡರ್ಗಳನ್ನು ಅಕ್ರಮವಾಗಿ ವಾಣಿಜ್ಯೋದ್ಯಮಕ್ಕೆ ಮಾರಾಟ ಮಾಡುತ್ತಿರುವ ಮಾಹಿತಿ ಮೇರೆಗೆ ದಾಳಿ ಮಾಡಿದ ಆಹಾರ ನಿರೀಕ್ಷಕರಾದ ವಿಜಯಕುಮಾರ ಗುಮಶೆಟ್ಟಿ, ನಯೀಮ ಅತ್ತಾರ ಹಾಗೂ ಸಿಬ್ಬಂದಿ ಒಟ್ಟು 8 ಗ್ಯಾಸ್ ತುಂಬಿದ ಗೃಹೋಪಯೋಗಿ ಸಿಲಿಂಡರ್ಗಳನ್ನು ವಶಪಡಿಸಿಕೊಂಡಿದ್ದಾರೆ.