ಬಾಗ್ಡಾನ್ ಬೊಬ್ರಾವ್ ಮುಡಿಗೆ ದಾವಣಗೆರೆ ಓಪನ್ ಪ್ರಶಸ್ತಿ
Oct 30 2023, 12:30 AM ISTಅಮೆರಿಕದ ನಿಕ್ ಚಾಪೆಲ್ ವಿರುದ್ಧ 6-3, 7-6(7-4) ನೇರ ಸೆಟ್ಗಳಿಂದ ಮಣಿಸುವ ಮೂಲಕ ಬಾಗ್ಡಾನ್ ಬೊಬ್ರಾವ್ ಐಟಿಎಫ್ ದಾವಣಗೆರೆ ಓಪನ್ ಟೆನ್ನಿಸ್ ಪಂದ್ಯಾವಳಿಯ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ನಗರದ ಹೈಸ್ಕೂಲ್ ಮೈದಾನದ ಟೆನ್ನಿಸ್ ಅಂಕಣದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಬಾಗ್ಡಾನ್ ಬೊಬ್ರಾವ್ ತಮ್ಮ ಎದುರಾಳಿ ಅಮೆರಿಕದ ನಿಕ್ ಚಾಪೆಲ್ ವಿರುದ್ಧ ನೇರ ಸೆಟ್ಗಳಿಂದ ಜಯ ಸಾಧಿಸುವ ಮೂಲಕ ತಮ್ಮ ಟೆನ್ನಿಸ್ ವೃತ್ತಿ ಬದುಕಿನ 6ನೇ ಐಟಿಎಪ್ ಪ್ರಶಸ್ತಿ ಮುಡಿಗೇರಿಸಿಕೊಂಡು, 2160 ಅಮೆರಿಕನ್ ಡಾಲರ್ ನಗದು ಬಹುಮಾನ ತಮ್ಮದಾಗಿಸಿಕೊಂಡರು.