ಹೋಳಿ ಬಣ್ಣಗಳಲ್ಲಿ ಮಿಂದೆದ್ದ ದಾವಣಗೆರೆ
Mar 26 2024, 01:16 AM ISTಹೋಳಿ ಹಬ್ಬದ ಬಣ್ಣದಲ್ಲಿ ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ಜನತೆ ಸೋಮವಾರ ಮಿಂದೆದ್ದರು. ಮಕ್ಕಳು, ವಯಸ್ಕರು ಎಂಬ ಬೇಧಭಾವ ಮರೆತು, ಉತ್ಸಾಹದಿಂದ ಬಣ್ಣಗಳೊಂದಿಗೆ ಹೋಳಿ ಆಟ ಆಡಿದರು. ಬೆಳಗ್ಗೆಯಿಂದಲೇ ಮಕ್ಕಳು, ಮಹಿಳೆಯರು, ಯುವಕ- ಯುವತಿಯರು ತಮ್ಮ ಸ್ನೇಹಿತರು, ಬಂಧು, ಬಳಗ, ನೆರೆ ಹೊರೆಯವರೊಂದಿಗೆ ಹೋಳಿ ಸಂಭ್ರಮದಲ್ಲಿ ಭಾಗಿಯಾದರು.