ದಾವಣಗೆರೆ ಕ್ಷೇತ್ರದಲ್ಲಿ ಈಗ ಬದಲಾವಣೆ ಗಾಳಿ: ವಿನಯಕುಮಾರ್
Apr 25 2024, 01:06 AM ISTಪಕ್ಷೇತರ ಅಭ್ಯರ್ಥಿ ಗೆಲ್ಲಲು ಅಸಾಧ್ಯ, ಚುನಾವಣೆಗೆ ನಿಲ್ಲಬೇಡ ಎಂದು ಕೆಲವರು ಹೇಳಿದ್ದು ನಿಜ. ಆದರೂ, ಇದೀಗ ರಾಜಕಾರಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಇದಕ್ಕೆ ಇಂಬು ನೀಡುವಂತೆ ನನ್ನ ಪರ ಮತದಾರರ ಒಲವು ವ್ಯಕ್ತವಾಗುತ್ತಿದ್ದು, ಇದು ನಮ್ಮ ಉತ್ಸಾಹ ಹೆಚ್ಚಿಸಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ದಾವಣಗೆರೆಯಲ್ಲಿ ಹೇಳಿದ್ದಾರೆ.