ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಶನಿವಾರ ಹೊರಬೀಳಲಿದೆ. ಇದರೊಂದಿಗೆ ದೇಶದ ಬಹುತೇಕ ರಾಜ್ಯಗಳಲ್ಲಿ ಆಳ್ವಿಕೆ ನಡೆಸುತ್ತಿರುವ ಬಿಜೆಪಿ ಮತ್ತು ಒಂದೊಂದೇ ರಾಜ್ಯಗಳಲ್ಲಿ ತನ್ನ ಹಿಡಿತ ಸಾಧಿಸಲು ಹಂಬಲಿಸುತ್ತಿರುವ ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಜಿದ್ದಾಜಿದ್ದಿಗೆ ತೆರೆ ಬೀಳಲಿದೆ.
ದೆಹಲಿ ವಿಧಾನಸಭೆಯ 70 ಸ್ಥಾನಗಳಿಗೆ ಬುಧವಾರ ಶಾಂತಿಯುತ ಮತದಾನ ನಡೆದಿದ್ದು, ಶೇ.60 ರಷ್ಟು ಮತ ಚಲಾವಣೆಯಾಗಿದೆ. ಮತದಾನ ಪೂರ್ಣ ಶಾಂತಿಯುತವಾಗಿ ನಡೆದಿದ್ದು, ರಾಜ್ಯದ ಮುಂದಿನ ಚುಕ್ಕಾಣಿ ಯಾರಿಗೆ ನೀಡಬೇಕು ಎಂಬುದರ ಬಗ್ಗೆ ರಾಜಧಾನಿಯ ಮತದಾರರು ತಮ್ಮ ನಿರ್ಧಾರ
ಆಪ್, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರೀ ವಾಕ್ಸಮರಕ್ಕೆ ಸಾಕ್ಷಿಯಾಗಿದ್ದ, ಮೂರೂ ಪಕ್ಷಗಳಿಂದ ಭರ್ಜರಿ ಉಚಿತ ಕೊಡುಗೆಗಳ ಘೋಷಣೆಗಳು ಮೊಳಗಿದ ದೆಹಲಿ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಫೆ.3ರ ಸೋಮವಾರ ತೆರೆ ಬೀಳಲಿದೆ.
ಇನ್ನೆರಡು ವಾರಗಳಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ದೆಹಲಿಯಲ್ಲಿ ಬಿಜೆಪಿ 3ನೇ ಹಂತದ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಮತ್ತೆ ಕೆಲವು ಭರವಸೆಗಳನ್ನು ಘೋಷಿಸಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ 3 ವರ್ಷಗಳಲ್ಲಿ ಯಮುನಾ ನದಿಯನ್ನು ಸ್ವಚ್ಛಗೊಳಿಸುವುದು ಇದರಲ್ಲಿ ಸೇರಿವೆ.