ತೆಲಂಗಾಣಕ್ಕೆ ಬಿಡುತ್ತಿರುವ ನೀರು ಸ್ಥಗಿತಗೊಳಿಸಿ
May 18 2024, 12:34 AM ISTಆಲಮಟ್ಟಿ ಜಲಾಶಯದಿಂದ ಸ್ಥಳೀಯ ರೈತರ ಜಮೀನುಗಳಿಗೆ ನೀರು ಒದಗಿಸದೇ ನಾರಾಯಣಪುರ ಜಲಾಶಯ ವ್ಯಾಪ್ತಿಯಲ್ಲಿ ತೆಲಂಗಾಣ ಮೂಲದ ಬಾಡಿಗೆ ರೈತರಿಗೆ ನೀರು ಒದಗಿಸಲಾಗುತ್ತಿದೆ. ಇದಕ್ಕಾಗಿ ಕಳೆದ ಕೆಲದಿನಗಳಿಂದ ಆಲಮಟ್ಟಿ ಜಲಾಯಶಯದ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ನದಿ ಪಾತ್ರಕ್ಕೆ ನಿತ್ಯ 2500 ಕ್ಯುಸೆಕ್ ನೀರು ಹರಿಬಿಡಲಾಗುತ್ತದೆ. ಇದನ್ನು ಕೂಡಲೇ ಬಂದ್ ಮಾಡಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘ ಆಗ್ರಹಿಸಿ ಶುಕ್ರವಾರ ಇಲ್ಲಿಯ ಕೆಬಿಜೆಎನ್ಎಲ್ ಉಪ ಮುಖ್ಯ ಎಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದರು.