ಮರಣೋತ್ತರ ಪರೀಕ್ಷೆ ಇತ್ತ ಕೊಲೆಯ ಸುಳಿವು
Oct 05 2024, 01:33 AM ISTತಾಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯ ಯಾದಲಗಟ್ಟೆ ಗ್ರಾಮದಲ್ಲಿ ಹೊಟ್ಟೆನೋವಿನಿಂದ ಮೃತಪಟ್ಟಿದ್ದಾರೆ ಎಂದು ನಂಬಲಾಗಿದ್ದ ವ್ಯಕ್ತಿಯ ಮರಣೋತ್ತರ ವರದಿಯಲ್ಲಿ ಅಸಹಜ ಸಾವು ಎಂದು ಹೇಳಲಾಗಿದ್ದು, ಕೊಲೆಯ ಶಂಕೆ ವ್ಯಕ್ತವಾಗಿದೆ. ಸೆ.27ರಂದು ರಾಘವೇಂದ್ರ (35) ಎಂಬುವವರು ಮನೆಯಲ್ಲೆ ಮೃತಪಟ್ಟಿದ್ದಾರೆ. ಅಂದು ಮಧ್ಯಾಹ್ನ ಮೃತ ರಾಘವೇಂದ್ರನ ಹೆಂಡತಿ ದಿವ್ಯ ದೂರವಾಣಿ ಮೂಲಕ ಮೃತನ ಸಹೋದರ ಕೆ.ಒ.ತಿಪ್ಪೇಸ್ವಾಮಿಗೆ, ‘ನಿನ್ನ ತಮ್ಮ ಹೊಟ್ಟೆನೋವು ಎಂದು ಮನೆಯಲ್ಲಿ ನರಳಾಡುತ್ತಿದ್ದಾನೆಂದು’ ತಿಳಿಸಿದ್ದಳು. ಆಗ ಬೆಂಗಳೂರಿನಲ್ಲಿದ್ದ ತಿಪ್ಪೇಸ್ವಾಮಿ ತನ್ನ ಬಂಧುಗಳಿಗೆ ಪೋನ್ ಮಾಡಿ ರಾಘವೇಂದ್ರನ ಆರೋಗ್ಯ ಸ್ಥಿತಿ ವಿಚಾರಿಸಿದ್ದಾರೆ.