ಭೂಮಿ ಮಹತ್ವವನ್ನು ಜನರಿಗೆ ಜಾಗೃತಿ ಮೂಲಕ ಅರಿವು ಮೂಡಿಸಬೇಕಿದೆ: ಎಂ.ಡಿ.ರೂಪ
Apr 23 2025, 12:37 AM IST1970 ರಿಂದ ಏ.22ರಂದು ವಿಶ್ವ ಭೂಮಿ ದಿನವನ್ನು ಆಚರಿಸಲಾಗುತ್ತಿದೆ. ಇಲ್ಲಿಗೆ 55 ವರ್ಷಗಳು ಕಳೆದರೂ ಭೂಮಿ ಬಗ್ಗೆ ಯಾರು ಕಾಳಜಿ ವಹಿಸುತ್ತಿಲ್ಲ. ಜನರು ಭೂಮಿ ಮೇಲಿನ ಪರಿಸರವನ್ನು ನಾಶ ಮಾಡುತ್ತಲೇ ಬಂದಿದ್ದಾರೆ. ವಿಶ್ವದಲ್ಲಿ ಮನುಷ್ಯ, ಪ್ರಾಣಿ, ಪಕ್ಷಿ ಸಂಕುಲ ಬದುಕಲು ಪರಿಸರವೇ ಕಾರಣವಾಗಿದೆ. ಭೂಮಿ ಮಹತ್ವವನ್ನು ಜನರಿಗೆ ಜಾಗೃತಿ ಮೂಲಕ ಅರಿವು ಮೂಡಿಸಬೇಕಿದೆ.