ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಬಿಟ್ಟೂ ಬಿಡದೇ ಸುರಿಯುತ್ತಿದ್ದ ಮಳೆರಾಯ, ಸೋಮವಾರ ಕೊಂಚ ಮುನಿಸು ತಣ್ಣಗಾಗಿಸಿದಂತೆ ಕಂಡುಬಂದಿತ್ತು. ಸತತ ಮಳೆಯಿಂದ ಜರ್ಝರಿತಗೊಂಡಿದ್ದ ಜನಜೀವನ ಸೋಮವಾರ ಕೊಂಚ ನಿಟ್ಟುಸಿರು ಬಿಟ್ಟಿದ್ದರು.
ಭಾರೀ ಮಳೆಯಿಂದಾಗಿ ಮೂಸಿ ನದಿ ನೀರಿನ ಮಟ್ಟ ಹೆಚ್ಚಿದ್ದು, ಅದರ ಸುತ್ತಮುತ್ತ ವಾಸಿಸುತ್ತಿರುವವರು ಪರದಾಡುವಂತಾಗಿದೆ. ನೀರಿನ ಮಟ್ಟ ಅಧಿಕವಾದ ಕಾರಣ ಜಲಾಶಯದ ಅವಳಿ ಗೇಟ್ ತೆರೆದದ್ದರಿಂದ ತಗ್ಗು ಪ್ರದೇಶದಲ್ಲಿ ವಾಸವಿರುವ ಸುಮಾರು 1000 ಜನ ಸಂಕಷ್ಟಕ್ಕೆ ಸಿಲುಕಿದ್ದು, ಅವರನ್ನೆಲ್ಲಾ ಸ್ಥಳಾಂತರಿಸಲಾಗಿದೆ.
ರಾಜ್ಯದ ಉತ್ತರ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಶನಿವಾರ, ಭಾನುವಾರ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ನ ಎಚ್ಚರಿಕೆ ನೀಡಿದೆ.