ಮಳೆ ಹಾನಿ ಪ್ರದೇಶಗಳಿಗೆ ಸಚಿವ ಜಾರಕಿಹೊಳಿ ಭೇಟಿ, ಪರಿಶೀಲನೆ
May 30 2025, 12:49 AM IST ಶೃಂಗೇರಿ, ತಾಲೂಕಿನಾದ್ಯಂತ ಕಳೆದ ಏಳೆಂಟು ದಿನಗಳಿಂದ ಸುರಿದ ಮುಂಗಾರು ಪೂರ್ವ ಮಳೆ ಗುರುವಾರ ಕೊಂಚ ತಗ್ಗಿತ್ತು. ಮಳೆಯ ಆರ್ಭಟಕ್ಕೆ ವ್ಯಾಪಕ ಹಾನಿಯುಂಟಾಗಿದೆ. ಕೆಲವೆಡೆ ರಸ್ತೆಗಳು ಮಳೆಯಿಂದ ಕೊಚ್ಚಿಕೊಂಡು ಹೋಗಿರುವುದಲ್ಲದೆ, ಸೇತುವೆಗಳು ಹಾನಿಗೊಳಗಾಗಿದೆ. ಗಾಳಿಯಿಂದ ವಿದ್ಯುತ್ ಕಂಬಗಳು, ಲೈನ್ ಗಳು ಮುರಿದು ಹಾಳಾಗಿದೆ.