ಸಿಂಧನೂರು ತಾಲೂಕನ್ನು ಸಂಪೂರ್ಣ ನೀರಾವರಿಯನ್ನಾಗಿಸಲು ಬದ್ಧ: ಮುಖ್ಯಮಂತ್ರಿ
Dec 31 2023, 01:30 AM ISTಸಿಂಧನೂರು ತಾಲೂಕು ಈಗಾಗಲೇ ಶೇ.80ರಷ್ಟು ನೀರಾವರಿ ಸೌಲಭ್ಯ ಹೊಂದಿದ್ದು, ಅದನ್ನು ಶೇ.100 ರಷ್ಟು ಮಾಡುವ ಗುರಿ ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಭರವಸೆ ನೀಡಿದರು. ಸ್ಥಳೀಯ ಸರ್ಕಾರಿ ಪದವಿ ಕಾಲೇಜಿನ ಮೈದಾನದಲ್ಲಿ ಶನಿವಾರ ತಿಮ್ಮಾಪುರ ಏತ ನೀರಾವರಿ ಯೊಜನೆ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನೀರಿನ ಲಭ್ಯತೆ ಇದ್ದಾಗ ಅದನ್ನು ಕೃಷಿ ಉಪಯೋಗಕ್ಕೆ ಕಲ್ಪಿಸಿ ರೈತರನ್ನು ಮೇಲ್ದರ್ಜೆಗೇರಿಸುವುದೇ ನಮ್ಮ ಸರ್ಕಾರದ ಗುರಿಯಾಗಿದೆ ಎಂದರು.