ಇಂದು ಭಾರತದಲ್ಲಿರುವ ಜನಧನ್ ಶೂನ್ಯ ಬ್ಯಾಲೆನ್ಸ್ ಬ್ಯಾಂಕ್ ಖಾತೆಗಳ ಸಂಖ್ಯೆ ಯುರೋಪಿನ ಅಷ್ಟೂ ದೇಶಗಳ ಒಟ್ಟು ಜನಸಂಖ್ಯೆಗಿಂತ ಹೆಚ್ಚು. ಅದರ ಪೈಕಿ ಶೇ.57ರಷ್ಟು ಖಾತೆಗಳು ಮಹಿಳೆಯರದು. ಹೀಗಾಗಿ ಈ ಯೋಜನೆ ಇಂದು ಮಹಿಳಾ ಸಬಲೀಕರಣದ ಮೆಟ್ಟಿಲಾಗಿ ಪರಿಣಮಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು, ‘ಮಹಿಳೆಯರ ಮೇಲೆ ಎಸಗುವ ಅಪರಾಧ ಕೃತ್ಯಗಳಿಗೆ ಕ್ಷಮೆಯಿಲ್ಲ. ಅದು ಮಹಾಪಾಪ’ ಎಂದು ಗುಡುಗಿದ್ದಾರೆ. ಅಲ್ಲದೆ, ‘ಸ್ತ್ರೀಪೀಡಕರಿಗೆ ಕಠಿಣ ಶಿಕ್ಷೆ ನೀಡಲು ಕಾಯ್ದೆಯನ್ನು ನಮ್ಮ ಸರ್ಕಾರ ಬಲಗೊಳಿಸುತ್ತಿದೆ’ ಎಂದಿದ್ದಾರೆ.