ಪ್ರಧಾನಿ ಮೋದಿ ‘ಮಂಗಳಸೂತ್ರ’ ಹೇಳಿಕೆಗೆ ಸಡ್ಡು । ದೇಶಕ್ಕೆ ಮಂಗಳಸೂತ್ರವನ್ನೇ ನನ್ನಮ್ಮ ತ್ಯಾಗ ಮಾಡಿದ್ದಾರೆ: ಪ್ರಿಯಾಂಕಾ ಗಾಂಧಿ ಕಿಡಿ
Apr 24 2024, 02:27 AM IST‘ನನ್ನ ತಾಯಿ ಈ ದೇಶಕ್ಕಾಗಿ ತಮ್ಮ ಮಂಗಳಸೂತ್ರವನ್ನೇ ತ್ಯಾಗ ಮಾಡಿದವರು. ನನ್ನ ಅಜ್ಜಿ ಯುದ್ಧದ ಸಂದರ್ಭದಲ್ಲಿ ತಮ್ಮ ಬಂಗಾರವನ್ನು ದೇಶಕ್ಕೆ ಅರ್ಪಿಸಿದವರು. ಅಂತಹ ಕುಟುಂಬ ಮತ್ತು ಪಕ್ಷ ನಮ್ಮದು. ಆದರೆ, ಮಹಿಳೆಯರ ಮಂಗಳಸೂತ್ರದ ಮಹತ್ವ ಅರಿಯದ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳೆಯರ ಭಾವನೆಗಳಿಗೆ ಘಾಸಿ ಮಾಡುತ್ತಿದ್ದಾರೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ಮಾಡಿದರು.