ಮಳೆ ನಿಂತ ಹಿನ್ನೆಲೆ ಬೆಳೆಗಳ ಆರೈಕೆಯಲ್ಲಿ ರೈತರು
Jun 13 2025, 05:53 AM ISTಮುಂಗಾರು ಪೂರ್ವ ಮಳೆಗೆ ತತ್ತರಿಸಿದ್ದ ಇಳೆಗೆ ಇದೀಗ ಒಣ ಹವೆ ಸೃಷ್ಟಿಯಾಗಿದ್ದು ರೈತರು ಬಿತ್ತಿದ ಬೆಳೆಗಳನ್ನು ಉಳಿಸಿಕೊಳ್ಳಲು ಮಗ್ನರಾಗಿದ್ದಾರೆ. ಕೆಲ ದಿನಗಳಿಂದ ಮಳೆ ಇಲ್ಲದ ಕಾರಣ ರೈತರು ಜಮೀನುಗಳತ್ತ ಮುಖ ಮಾಡಿದ್ದು ಹೊಗೆಸೊಪ್ಪು ಗಿಡಗಳಿಗೆ ರಸಗೊಬ್ಬರ ನೀಡಿ ಕಳೆ ತೆಗೆಯುತ್ತಿದ್ದಾರೆ. ಕೆಲವು ಕಡೆ ಮಳೆಯಿಂದಾಗಿ ಗಿಡಗಳಿಗೆ ಸೊರಗು ರೋಗ ಕಾಣಿಸಿಕೊಂಡಿದೆ. ಔಷಧಿ ಸಿಂಪಡಣೆ ಮಾಡಿ ರೈತರು ಬೆಳೆ ರಕ್ಷಣೆ ಮಾಡಿಕೊಳ್ಳಲು ನಿರತರಾಗಿದ್ದಾರೆ. ಆಲೂಗಡ್ಡೆಯನ್ನು ಮಳೆ ಕಾರಣ ಸದ್ಯಕ್ಕೆ 350 ಎಕರೆ ಜಮೀನಿನಲ್ಲಿ ಬಿತ್ತನೆ ಮಾಡಲಾಗಿದೆ. ಭಾರಿ ಮಳೆ ಪರಿಣಾಮ ಆಲೂಗಡ್ಡೆ ಬಿತ್ತನೆಗೆ ಹಿನ್ನಡೆಯಾಗಿದೆ.