ಅಸಮರ್ಪಕ ಬರ ಪರಿಹಾರ: ಹಣ ಸಂಗ್ರಹಿಸಿಸರ್ಕಾರಕ್ಕೆ ನೀಡಲು ಮುಂದಾದ ರೈತರು
Dec 12 2023, 12:45 AM ISTಬರ ಪರಿಹಾರವಾಗಿ 2 ಸಾವಿರ ರುಪಾಯಿ ನೀಡಿರುವ ಸರ್ಕಾರದ ಕ್ರಮ ಖಂಡಿಸಿ, ಸರ್ಕಾರ ನಡೆಸಲು ಸಿಎಂ, ಡಿಸಿಎಂಗೆ ನೀಡಲೆಂದು ಹಣ ಸಂಗ್ರಹಿಸಿ ರೈತರು ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಪಟ್ಟಣದಲ್ಲಿ ನಡೆಯಿತು. ರೈತ ಮುಖಂಡರಾದ ಎಂ.ಎನ್. ನಾಯಕ್ ಹಾಗೂ ಮಾಲತೇಶ ಪೂಜಾರ ನೇತೃತ್ವದಲ್ಲಿ ಸವಣೂರು ತಹಸೀಲ್ದಾರ್ ಕಚೇರಿ ಎದುರು ರೈತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.