ಕೂಲಿ ಮಾಡದಿದ್ದರೂ ಫಲಾನುಭವಿ ಖಾತೆಗೆ ಹಣ ವರ್ಗ!?
Jan 18 2024, 02:00 AM IST ಕೊಳ್ಳೇಗಾಲತಾಲೂಕಿನ ದೊಡ್ಡಿಂದುವಾಡಿ ಗ್ರಾಪಂನಲ್ಲಿ ಬಸವ ವಸತಿ ಯೋಜನೆಯಡಿ ಕೂಲಿ ಮಾಡದಿದ್ದರೂ ಫಲಾನುಭವಿಯಲ್ಲದ ವ್ಯಕ್ತಿಯೊಬ್ಬರ ಖಾತೆಗೆ ಹಣ ಹಾಕುವ ಮೂಲಕ ಗ್ರಾಪಂನ ಪಿಡಿಓ ಕರ್ತವ್ಯಲೋಪ ಎಸಗುವ ಜೊತೆಗೆ ವಿವಾದಕ್ಕೂ ಈಡಾಗಿದ್ದಾರೆ. ದೊಡ್ಡಿಂದುವಾಡಿ ಗ್ರಾಪಂನ ಪ್ರಸಾದ್ ಗ್ರಾಪಂ ವ್ಯಾಪ್ತಿಯಲ್ಲಿ ಬಸವ ವಸತಿ ಯೋಜನೆಯಡಿ ಕೂಲಿ ಕೆಲಸವನ್ನೆ ನಿರ್ವಹಿಸಿರಲಿಲ್ಲ, ಹಾಗಿದ್ದರೂ ಆತನ ದೊಡ್ಡಿಂದುವಾಡಿ ಗ್ರಾಮ ಶಾಖೆ ಸಂಖ್ಯೆಯ 64142948060 ಖಾತೆಗೆ ದಿನಾಂಕ 10-11-2023ರಲ್ಲಿ 2 ಬಾರಿ ಕ್ರಮವಾಗಿ 1580 ,1896 ರು.ಗಳನ್ನು ಹಾಕುವ ಮೂಲಕ ಒಟ್ಟಾರೆ (3476 ರು.ಗಳನ್ನು) ಖಾತೆಗೆ ಜಮೆಯಾಗಿದ್ದು ಹಲವು ಸಂಶಯಕ್ಕೆಡೆ ಮಾಡಿಕೊಟ್ಟಿದೆ.