ರಂಗಮಂದಿರದ ಸ್ಥಿತಿ ವೀಕ್ಷಿಸಿದ ಅಧಿಕಾರಿಗಳು
Mar 16 2024, 01:46 AM ISTಗುಳೇದಗುಡ್ಡ: ಕಳೆದ ನಾಲ್ಕು ದಶಕಗಳಿಂದ ಅಪೂರ್ಣ ಸ್ಥಿತಿಯಲ್ಲಿರುವ, ಶಿಥಿಲಾವಸ್ಥೆ ತಲುಪಿರುವ ನಿರುಪಯುಕ್ತ ಕಂದಗಲ್ ಹನಮಂತರಾಯ ರಂಗಮಂದಿರವನ್ನು ಶುಕ್ರವಾರ ಬಾಗಲಕೋಟೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕ ಕರಣಕುಮಾರ ಜೈನಾಪೂರ ಮತ್ತು ಕೆಆರ್ಐಡಿಎಲ್ ಅಭಿಯಂತರ ಮೈಬೂಬ್ ಯಂಡಿಗೇರಿ ವೀಕ್ಷಿಸಿ ಸ್ಥಿತಿಗತಿ ಅವಲೋಕಿಸಿದರು.