ಲೋಕಸಭೆ ಚುನಾವಣೆಗೆ ಸಿದ್ದೇಶ್ವರೇ ಬಿಜೆಪಿ ಅಭ್ಯರ್ಥಿ: ಮಾಜಿ ಶಾಸಕ ಎಸ್.ವಿ.ರಾಮಚಂದ್ರ
Feb 02 2024, 01:02 AM ISTಸಂಸದ ಜಿ.ಎಂ.ಸಿದ್ದೇಶ್ವರ ನಾಲ್ಕು ಬಾರಿ ಹಾಗೂ ಅವರ ತಂದೆ ಎರಡು ಬಾರಿ ಸಂಸತ್ ಸದಸ್ಯರಾಗಿ ದಾವಣಗೆರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳ ಮಾಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜಿ.ಎಂ. ಸಿದ್ದೇಶ್ವರ ಬಿಜೆಪಿ ಅಭ್ಯರ್ಥಿ ಆಗಿ ಜಗಳೂರು ವಿಧಾನಸಭಾ ಕ್ಷೇತ್ರವೇ ಅತಿ ಹೆಚ್ಚು ಮತ ನೀಡಿ ಗೆಲ್ಲಿಸುವಂತಾಗಬೇಕು. ಪ್ರಪಂಚ ಪ್ರಳಯವಾದರೂ ದೇಶದಲ್ಲಿ ನರೇಂದ್ರ ಮೋದಿಯೇ ಪ್ರಧಾನಿ, ದಾವಣಗೆರೆ ಕ್ಷೇತ್ರದಲ್ಲಿ ಸಿದ್ದೇಶ್ವರ ಅವರೇ 5ನೇ ಬಾರಿ ಸಂಸದರಾಗಲಿದ್ದಾರೆ.