ದುಷ್ಕರ್ಮಿಗಳಿಂದ ಬೆಂಕಿ; ನೂರಾರು ಎಕರೆ ಅರಣ್ಯ ನಾಶ
Mar 05 2025, 12:36 AM ISTದುಷ್ಕರ್ಮಿಗಳು ಹಚ್ಚಿದ ಬೆಂಕಿಯಿಂದ ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ನಾಶವಾಗಿರುವ ಘಟನೆ ತಾಲೂಕಿನ ಶಿವನಸಮುದ್ರ ಬಳಿಯ ಶಿಂಷಾ ಅರಣ್ಯ ಪ್ರದೇಶದಲ್ಲಿ ಜರುಗಿದೆ. ಶಿಂಷಾ ಅರಣ್ಯಕ್ಕೆ ಸೇರಿದ ಸೊಪ್ಪಿನ ಗುಡ್ಡೆ ಪ್ರದೇಶದಲ್ಲಿ ಸೋಮವಾರ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡು ನೂರಾರು ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದೆ. ಈ ಪ್ರದೇಶದಲ್ಲಿ ಬೆಳೆದು ನಿಂತಿದ್ದ ಅಪಾರ ಪ್ರಮಾಣದ ಮರಗಿಡಗಳು, ಬಹು ಉಪಯೋಗಿ ಸಸ್ಯ ಸಂಕುಲ ಬೆಂಕಿಗೆ ಆಹುತಿಯಾಗಿವೆ.