ಭದ್ರಾವತಿ ನಗರಸಭೆಗೆ ₹6199.47 ಲಕ್ಷ ಆದಾಯ ನಿರೀಕ್ಷೆ
Jan 25 2024, 02:03 AM ISTಭದ್ರಾವತಿ ನಗರಸಭೆ ಸ್ವಂತ ಆದಾಯಗಳಾದ ಸ್ವಯಂ ಘೋಷಿತ ಆಸ್ತಿ ತೆರಿಗೆ, ನೀರಿನ ತೆರಿಗೆ ಮತ್ತು ಇತರೇ ಆದಾಯ ಹಾಗೂ ಸರ್ಕಾರದ ಅನುದಾನಗಳು ಸೇರಿ ಒಟ್ಟು ₹6199.47 ಲಕ್ಷ ನಿರೀಕ್ಷೆ ಇಟ್ಟುಕೊಂಡು ನಗರದ ಅಭಿವೃದ್ಧಿ ಹಾಗೂ ನಿರ್ವಹಣೆಗಾಗಿ 2024-25ನೇ ಸಾಲಿನ ಬಜೆಟ್ ತಯಾರಿಸಬಹುದು. ಸೂಕ್ತ ಸಲಹೆ, ಸಹಕಾರ ನೀಡುವಂತೆ ನೂತನ ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್ ಬುಧವಾರ ಪೂರ್ವಭಾವಿ ಸಭೆಯಲ್ಲಿ ಕೋರಿದ್ದಾರೆ.