ಕಳವು ಆರೋಪಿ ಬಂಧನ: ೪೯೦ ಗ್ರಾಂ ಚಿನ್ನಾಭರಣ ವಶ
Jun 13 2025, 05:09 AM ISTಮನೆಗಳಿಗೆ ಕನ್ನ ಹಾಕಿ ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ನಾಗಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿ ಆತನಿಂದ ೪೯೦ ಗ್ರಾಂ ತೂಕದ ೪೦ ಲಕ್ಷ ರು. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಹಾಸನ ಜಿಲ್ಲೆ ಆಲೂರು ತಾಲೂಕು ಮುದಿಗೆರೆ ಗ್ರಾಮದ ಎಂ.ವಿ.ರಂಗೇಗೌಡ ಅಲಿಯಾಸ್ ಸಂತೋಷ ಅಲಿಯಾಸ್, ಐಪಿಎಲ್ ಸಂತೋಷ್ (೩೭) ಎಂಬಾತನೇ ಬಂಧಿತ ಆರೋಪಿ.