ಶುದ್ಧ ನೀರು, ಮಿತ ಆಹಾರ ಉತ್ತಮ ಆರೋಗ್ಯದ ರಹಸ್ಯ
Apr 07 2024, 01:53 AM ISTಮಹಾಲಿಂಗಪುರ: ಶುದ್ಧ ಗಾಳಿ, ಶುದ್ಧ ನೀರು ಮತ್ತು ಮಿತ ಆಹಾರ ಸೇವನೆ ಆರೋಗ್ಯಪೂರ್ಣ ಜೀವನದ ರಹಸ್ಯ ಎಂದು ಧಾರವಾಡದ ಮನಗುಂಡಿಯ ಮಹಾಮನೆಯ ಬಸವಾನಂದ ಸ್ವಾಮಿಗಳು ಹೇಳಿದರು. ಸ್ಥಳೀಯ ಶ್ರೀ ಸಿದ್ದಾರೂಢ ಬ್ರಹ್ಮ ವಿದ್ಯಾಶ್ರಮದಲ್ಲಿ ಹುರಕಡ್ಲಿ ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಹತ್ತು ದಿನಗಳ ಅರೋಗ್ಯ ಯೋಗ ಮತ್ತು ಕ್ಯಾನ್ಸರ ಚಿಕಿತ್ಸೆ ಶಿಬಿರದ 9ನೇ ದಿನದ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.