ಉಡುಪಿ ಪತ್ರಕರ್ತರ ಕ್ಷೇಮಾಭಿವೃದ್ಧಿಗೆ ಮಾಹೆ 5 ಲಕ್ಷ ರು. ದೇಣಿಗೆ
Feb 08 2024, 01:32 AM ISTಉಡುಪಿ ಜಿಲ್ಲಾ ಕಾರ್ಯನಿರತರ ಪತ್ರಕರ್ತ ಸಂಘದ ಸದಸ್ಯರಿಗೆ ಅನಾರೋಗ್ಯ, ಅಪಘಾತ ಸಹಿತ ಯಾವುದೇ ಅವಘಡ ಸಂಭವಿಸಿದಾಗ ನೆರವು ನೀಡಲು ಸ್ಥಾಪಿಸಲಾಗಿರುವ ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಏಜ್ಯುಕೇಶನ್ (ಮಾಹೆ) 5 ಲಕ್ಷ ರು. ನೀಡಿದೆ.ಮಾಹೆ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಹಾಗೂ ಉಪಕುಲಪತಿ ಲೆ. ಜ. ಡಾ.ಎಂ.ಡಿ.ವೆಂಕಟೇಶ್ ಅವರು ಪತ್ರಕರ್ತರ ಸಂಘಕ್ಕೆ 5 ಲಕ್ಷ ರು.ಗಳ ಚೆಕ್ಕನ್ನು ಹಸ್ತಾಂತರಿಸಿದರು.