ಶಿಕ್ಷಣದಲ್ಲಿ ಕನ್ನಡ ಮರೆತರೆ ಮಕ್ಕಳು, ಯುವಜನರ ಕ್ರಿಯಾಶೀಲತೆ ನಾಶ
Oct 22 2024, 12:15 AM ISTಕನ್ನಡ ನಾಡಲ್ಲಿ ಕನ್ನಡಿಗರಿಗೆ ಸಾಹಿತ್ಯ ಓದು, ಕನ್ನಡದ ಮಹತ್ವ ತಿಳಿಹೇಳುವ ಅಗತ್ಯವಿದೆ. ಶಿಕ್ಷಣದಲ್ಲಿ ಕನ್ನಡ ಮರೆತರೆ ಕ್ರಿಯಾಶೀಲ ಮಕ್ಕಳು, ಯುವಕರನ್ನು ರೂಪಿಸುವಲ್ಲಿ ವಿಫಲರಾಗುತ್ತೇವೆ. ಇಂತಹ ಸಂದರ್ಭಗಳಲ್ಲಿ ಸಾಂಸ್ಕೃತಿಕ ವಾತಾವರಣದಲ್ಲಿ ನಾಡು, ನುಡಿ ಕುರಿತು ಚಿಂತಿಸುವ ಅಗತ್ಯವಿದೆ. ಈ ಕಾರಣದಿಂದ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ರೂಪಿಸಲಾಯಿತು ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ವಿವರಿಸಿದರು.