ಕುಂದಾನಗರಿಯಲ್ಲಿ ಕಾಂಗ್ರೆಸ್ ಶತಮಾನೋತ್ಸವದ ಕಲರವ
Dec 26 2024, 01:03 AM ISTಮೋಹನದಾಸ ಕರಮಚಂದ ಗಾಂಧಿ. ಅರ್ಥಾತ್ ಮಹಾತ್ಮ ಗಾಂಧಿ. 1924, ಡಿಸೆಂಬರ್ ಕಾಂಗ್ರೆಸ್ನ ಸಮಾವೇಶದ ಮೂಲಕ ಕುಂದಾನಗರಿ ಬೆಳಗಾವಿಯನ್ನು ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಿದರು. ಈಗ ಅದರ ಶತಮಾನೋತ್ಸವದ ಸಂಭ್ರಮ. ಈ ನಿಟ್ಟಿನಲ್ಲಿ ಬೆಳಗಾವಿ ನಗರಕ್ಕೆ ಕಾಂಗ್ರೆಸ್ನ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸೇರಿದಂತೆ ದೇಶದ ನಾನಾ ಭಾಗಗಳಿಂದ ಘಟಾನುಘಟಿಗಳು ಆಗಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಳಗಾವಿ ನಗರದಲ್ಲಿ ಈಗ ವಿದ್ಯುತ್ ಮತ್ತು ನಾಯಕರ ಆಗಮನದ ಶುಭಾಶಯಗಳನ್ನು ಕೋರಿದ ಕಟೌಟ್ಗಳೇ ತುಂಬಿಕೊಂಡಿವೆ.