ಅಧಿಕಾರ ಎಲ್ಲಿ ಸಿಗುತ್ತದೆಯೋ ಯೋಗೇಶ್ವರ್ ಅಲ್ಲಿಗೆ ಜಂಪ್ ಆಗುತ್ತಾರೆ. ಯಾವಾಗ ತರಾತುರಿಯಲ್ಲಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರೋ ಆಗಲೇ ಅವರು ಕಾಂಗ್ರೆಸ್ ಸೇರುವುದು ನಿಶ್ಚಿತವಾಗಿತ್ತು ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣ ತಾಲೂಕಿನ ಜೆಡಿಎಸ್ ಮುಖಂಡರು ಕ್ಷೇತ್ರವನ್ನು ಪಕ್ಷಕ್ಕೆ ಉಳಿಸಿಕೊಂಡು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸುವಂತೆ ಒಕ್ಕೊರಲ ನಿರ್ಧಾರ ಕೈಗೊಂಡಿದ್ದಾರೆ.
ನಾನು ಯಾರಿಗೂ ಠಕ್ಕರ್ ಕೊಡಲು ಇಲ್ಲಿಗೆ ಬಂದಿಲ್ಲ. ಇನ್ನೊಬ್ಬರನ್ನು ಮೆಚ್ಚಿಸುವುದಕ್ಕಾಗಿ ಉದ್ಯೋಗ ಮೇಳ ಮಾಡುತ್ತಿಲ್ಲ. ಜನರು ನನ್ನನ್ನು ನಂಬಿ ಮತ ಕೊಟ್ಟಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುತ್ತಿದ್ದೇನೆ. ಇನ್ನೊಬ್ಬರು ಕೊಡುವ ಸರ್ಟಿಫಿಕೇಟ್‌ಗೆ ಕೆಲಸ ಮಾಡುವವನು ನಾನಲ್ಲ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್‌ನವರು ಯಾವ ಅಭ್ಯರ್ಥಿಯನ್ನಾದರೂ ಹಾಕಲಿ, ನಮ್ಮದು ಕೇವಲ ದೇವೇಗೌಡರ ಕುಟುಂಬ ಅಲ್ಲ, ನಮ್ಮದು ಈಗ ಎನ್‌ಡಿಎ ಕುಟುಂಬ. ಎನ್‌ಡಿಎ ಕುಟುಂಬದಿಂದ ಒಬ್ಬ ಅಭ್ಯರ್ಥಿ ಇರುತ್ತಾನೆ. ಅಭ್ಯರ್ಥಿ ಆಯ್ಕೆಯಲ್ಲಿ ಯಾವ ಜಂಜಾಟವೂ ಇಲ್ಲ.