ವಿವಾದಾತ್ಮಕ ಹೇಳಿಕೆ, ಯತ್ನಾಳಗೆ ಡಿಮಾನ್ಸ್‌ನಲ್ಲಿ ಚಿಕಿತ್ಸೆ ಅಗತ್ಯವಿದೆ

Dec 08 2023, 01:45 AM IST
ಕನ್ನಡಪ್ರಭ ವಾರ್ತೆ ಧಾರವಾಡಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನ ನೀಡದ ಹಿನ್ನೆಲೆಯಲ್ಲಿ ಹತಾಶೆಗೊಂಡು ಏನೇನೋ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಹುಚ್ಚು ಹಿಡಿದಿದ್ದು ಧಾರವಾಡದ ಡಿಮಾನ್ಸ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳಲಿ ಎಂದು ಧಾರವಾಡ ಅಂಜುಮನ್‌ ಇಸ್ಲಾಂ ಸಂಸ್ಥೆ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ಇಸ್ಮಾಯಿಲ್‌ ತಮಟಗಾರ ಹೇಳಿದರು.ಮುಸ್ಲಿಂ ಧರ್ಮಗುರುವೊಬ್ಬರಿಗೆ ಭಯೋತ್ಪಾದಕರ ನಟಿದೆ ಹಾಗೂ ಅವರಿಗೆ ಭಯೋತ್ಪಾದಕ ಸಂಘಟನೆಗಳಿಂದ ಹಣ ಬರುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಅಧಿವೇಶನ ನಡೆಸುತ್ತಿದ್ದು ಈ ಬಗ್ಗೆ ಚರ್ಚೆ ಮಾಡುವುದು ಬಿಟ್ಟು ಯತ್ನಾಳ ರಾಜ್ಯದಲ್ಲಿ ಶಾಂತಿ ಕದಡುವ ಹೇಳಿಕೆ ನೀಡಿದ್ದಾರೆ. ಸ್ಥಾನಮಾನ ಸಿಗದೇ ಹತಾಶರಾಗಿದ್ದರೆ ಧಾರವಾಡದ ಡಿಮಾನ್ಸಗೆ ಬಂದು ಚಿಕಿತ್ಸೆ ಪಡೆಯಲಿ. ಅದನ್ನು ಬಿಟ್ಟು ಸಮಾಜದಲ್ಲಿ ವಿಷ ಬೀಜ ಬಿತ್ತುವುದು ಬೇಡ ಎಂದರು.

ಸರ್ಕಾರಿ ಆರೋಗ್ಯ ಕಾರ್ಡ್‌ನಡಿ ಇನ್ನು ದೇಶಾದ್ಯಂತ ಚಿಕಿತ್ಸೆ

Dec 07 2023, 01:15 AM IST
ಆಯುಷ್ಮಾನ್‌ ಭಾರತ-ಆರೋಗ್ಯ ಕರ್ನಾಟಕದಡಿ ಬಿಪಿಎಲ್‌, ಎಪಿಎಲ್‌ ಕುಟುಂಬಗಳಿಗೆ ಹೊಸ ಕಾರ್ಡ್‌. ಸಿದ್ದು ಬಿಡುಗಡೆ. 6 ತಿಂಗಳಲ್ಲಿ 5 ಕೋಟಿ ಕಾರ್ಡ್‌ ವಿತರಿಸುವ ಗುರಿ. ಶೀಘ್ರದಲ್ಲಿ ಜನರಿಗೆ ಸಿಗಲಿದೆ ಕಾರ್ಡ್‌. ನೂತನ ಕಾರ್ಡ್‌ಗಳು ರಾಷ್ಟ್ರೀಯ ಪೋರ್ಟಲ್‌ ಜತೆ ಸಂಯೋಜನೆಗೊಂಡಿವೆ. ಹೀಗಾಗಿ ಇತರೆ ರಾಜ್ಯಗಳಲ್ಲೂ ಈ ಆರೋಗ್ಯ ಕಾರ್ಡ್‌ನಿಂದ ಚಿಕಿತ್ಸೆ ಲಭ್ಯ. ಬಿಪಿಎಲ್‌ ಕುಟುಂಬದಾರರಿಗೆ ವಾರ್ಷಿಕ 5 ಲಕ್ಷ ರು.ವರೆಗೆ ಉಚಿತ ಚಿಕಿತ್ಸೆ. ಚಿಕಿತ್ಸೆ ವೆಚ್ಚಕ್ಕೆ ಶೇ.66 ಅನುದಾನ ರಾಜ್ಯ, ಶೇ.34 ಅನುದಾನ ಕೇಂದ್ರದಿಂದ. ಎಪಿಎಲ್‌ ಕುಟುಂಬಗಳಿಗೆ 5 ಲಕ್ಷ ರು. ಪೈಕಿ 1.5 ಲಕ್ಷ ರು.ವರೆಗೆ ಚಿಕಿತ್ಸೆ ಉಚಿತ. 5 ಲಕ್ಷ ರು. ಚಿಕಿತ್ಸಾ ವೆಚ್ಚದ ಪೈಕಿ ಶೇ.70ರಷ್ಟನ್ನು ಕಾರ್ಡ್‌ದಾರರು ಪಾವತಿಸಬೇಕು.