ಜಾತಿ ಗಣತಿ ವಿರುದ್ಧ ಈಗ ಲಿಂಗಾಯತರ ಸಹಿ ಸಂಗ್ರಹ

Nov 26 2023, 01:15 AM IST
ವರದಿ ಅಂಗೀಕರಿಸದಂತೆ ಒಕ್ಕಲಿಗರ ರೀತಿ ನಾವೂ ಸಿಎಂಗೆ ಮನವಿ ಸಲ್ಲಿಸುತ್ತೇವೆ. ವರದಿ ಒಪ್ಪಿಕೊಂಡರೆ ಕಾಂಗ್ರೆಸ್‌ ಪಕ್ಷಕ್ಕೆ 100% ತೊಂದರೆ ಗ್ಯಾರಂಟಿ: ಶಾಮನೂರು. ಜಾತಿ ಗಣತಿ ಸಮೀಕ್ಷೆ ವರದಿಗೆ ಬಿಜೆಪಿ, ಜೆಡಿಎಸ್‌ ವಿರೋಧವಿದೆ. ಮೌಖಿಕವಾಗಿ ಸಿಎಂ ಸಿದ್ದರಾಮಯ್ಯ ಜತೆ ನಾವೂ ಚರ್ಚಿಸಿದ್ದೇವೆ. ‘ನೋಡೋಣ ತಡಿಯಪ್ಪ’ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಒಕ್ಕಲಿಗರ ರೀತಿಯೇ ನಾವೂ ಮಾಡಿ ವಿರೋಧ ವ್ಯಕ್ತಪಡಿಸುತ್ತೇವೆ. ಜಾತಿ ಗಣತಿ ವರದಿ ಲೋಪದಿಂದ ಕೂಡಿದೆ ಎಂದು ಹೇಳುತ್ತಲೇ ಇದ್ದೇವೆ. ಸಮೀಕ್ಷೆಯಲ್ಲಿ ಲಿಂಗಾಯತ- ವೀರಶೈವ ಎಂದು ಬರೆದುಕೊಂಡೇ ಇಲ್ಲ. ವರದಿ ಸಲ್ಲಿಕೆ ಬಳಿಕ ಸರ್ಕಾರ ಏನು ಮಾಡುತ್ತದೆ ಎಂಬುದನ್ನು ನೋಡುತ್ತೇವೆ. ಅಖಿಲ ಭಾರತ ವೀರಶೈವ ಮಹಾ ಸಭಾ ಅಧ್ಯಕ್ಷ ಶಾಮನೂರು ಹೇಳಿಕೆ.