ಕುರುಬ ಸೇರಿ ಹಲವು ಜಾತಿ ಪ್ರವರ್ಗ 1ಬಿಗೆ? ಜಾತಿಗಣತಿ ವರದಿಯಲ್ಲಿ ಸಲಹೆ । ಸವಿತಾ, ಮತಾಂತರಗೊಂಡ ಎಸ್ಸಿಗಳೂ 1-ಬಿಗೆ

| N/A | Published : Apr 14 2025, 11:53 AM IST

Janata Curfew Vidhansoudha

ಸಾರಾಂಶ

ಜಾತಿವಾರು  ಸಮೀಕ್ಷೆ-2015ರ ವರದಿಯಲ್ಲಿ ಕುರುಬ ಮತ್ತು ಉಪಜಾತಿಗಳು, ಸವಿತಾ ಸಮಾಜ, ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿರುವ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ 2-ಎ ದಿಂದ ತೆಗೆದು ಅತ್ಯಂತ ಹಿಂದುಳಿದ ಎಂದು ಮರು ವರ್ಗೀಕರಣ ಮಾಡಿ ಪ್ರವರ್ಗ 1-ಬಿ ಗೆ ಸೇರಿಸಲು ಶಿಫಾರಸು ಮಾಡಲಾಗಿದೆ.

 ಬೆಂಗಳೂರು : ಜಾತಿವಾರು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ-2015ರ ವರದಿಯಲ್ಲಿ ಕುರುಬ ಮತ್ತು ಉಪಜಾತಿಗಳು, ಸವಿತಾ ಸಮಾಜ, ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿರುವ ಪರಿಶಿಷ್ಟ ಜಾತಿಗಳನ್ನು ಪ್ರವರ್ಗ 2-ಎ ದಿಂದ ತೆಗೆದು ಅತ್ಯಂತ ಹಿಂದುಳಿದ ಎಂದು ಮರು ವರ್ಗೀಕರಣ ಮಾಡಿ ಪ್ರವರ್ಗ 1-ಬಿ ಗೆ ಸೇರಿಸಲು ಶಿಫಾರಸು ಮಾಡಲಾಗಿದೆ.

ಅಲ್ಲದೆ, ಪ್ರವರ್ಗ 1-ಎ ಅಡಿ ಅಲೆಮಾರಿ ಹಾಗೂ ಅಲೆಮಾರಿ ಗುಣಲಕ್ಷಣಗಳಿರುವ ಅತ್ಯಂತ ಹಿಂದುಳಿದ 147 ಜಾತಿಗಳಿಗೆ ಕೆನೆಪದರ ನೀತಿ ಅನ್ವಯಿಸಬೇಕು. ಆದಾಯ ತೆರಿಗೆ ಮಿತಿ ಅಳವಡಿಸಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಸೌಲಭ್ಯ ಸಿಗುವಂತೆ ಮಾಡಬೇಕು ಎಂದು ಹಿಂದುಳಿದ ವರ್ಗಗಳ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.

ಶುಕ್ರವಾರ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾದ ವರದಿಯಲ್ಲಿ ಪ್ರವರ್ಗ-1 ಅನ್ನು ಮರು ವರ್ಗೀಕರಣ ಮಾಡಿ ಪ್ರವರ್ಗ 1-ಎ ಹಾಗೂ ಪ್ರವರ್ಗ 1-ಬಿ ಎಂದು ಮಾಡಲಾಗಿದೆ. ಪ್ರವರ್ಗ 1-ಬಿಗೆ ಪ್ರವರ್ಗ 2-ಎ ಅಡಿ ಇದ್ದ ಕೆಲ ಜಾತಿಗಳನ್ನು ಸೇರಿಸಲಾಗಿದೆ.

ಕುರುಬ ಮತ್ತು ಉಪಜಾತಿಗಳು, ಸವಿತಾ, ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿರುವ ಪರಿಶಿಷ್ಟ ಜಾತಿಗಳನ್ನು ಅತ್ಯಂತ ಹಿಂದುಳಿದ ವರ್ಗ ಎಂದು ಮರು ವರ್ಗೀಕರಣ ಮಾಡಿ, ಪ್ರವರ್ಗ 1 ಬಿ ಎಂದು ಗುರುತಿಸಿದೆ. ಈ ರೀತಿ ಸೇರ್ಪಡೆಯಾಗಿರುವ ಕುರುಬ ಮತ್ತು ಉಪಜಾತಿ- 43,72,847, ಕ್ರೈಸ್ತರಾಗಿ ಮತಾಂತರವಾದ ಪ.ಜಾತಿಯವರು 12,865 ಇದ್ದಾರೆ.

ಪ್ರವರ್ಗ 1ಕ್ಕೆ (1-ಎ) ಇದ್ದ ಮೀಸಲಾತಿಯನ್ನು ಶೇ.4 ರಿಂದ 6ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. 2-ಎಗೆ ಶೇ.15 ರಷ್ಟಿದ್ದ ಮೀಸಲಾತಿಯನ್ನು 1-ಬಿ ಹಾಗೂ 2-ಎಗೆ ಮರು ಹಂಚಿಕೆ ಮಾಡಲಾಗಿದೆ. ಹೀಗೆ ಮಾಡುವಾಗ 1 ಬಿಗೆ ಶೇ.12 ಹಾಗೂ 2-ಎಗೆ ಶೇ.10 ರಷ್ಟು ಮೀಸಲಾತಿ ಹಂಚಿಕೆ ಮಾಡಲಾಗಿದೆ.

ಅತಿ ಹಿಂದುಳಿದವರಿಗೂ ಕೆನೆಪದರ ನೀತಿ:

ವರದಿಯಲ್ಲಿ ಅತಿ ಹಿಂದುಳಿದಿರುವ ಪ್ರವರ್ಗ 1ಎ ಪಟ್ಟಿಯಲ್ಲಿರುವ ಜಾತಿಯವರಿಗೆ ಕೆನೆಪದರ ನೀತಿ ಅಗತ್ಯ ಎಂದು ಹೇಳಿರುವುದು ಕುತೂಹಲ ಕೆರಳಿಸಿದೆ. 2002ರಲ್ಲಿ ಕೆನೆಪದರ ನೀತಿ ಪ್ರಕಟಿಸಿದಾಗ ಶಿಕ್ಷಣ ಹಾಗೂ ನೇಮಕಾತಿ ವೇಳೆ ಮೀಸಲಾತಿಯಲ್ಲಿ ಕೆನೆಪದರವು ಪರಿಶಿಷ್ಟ ಜಾತಿ, ಪಂಗಡ ಹಾಗೂ ಪ್ರವರ್ಗ 1ರಲ್ಲಿನ ಜಾತಿಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಲಾಗಿತ್ತು. ಇದೀಗ ಪ್ರವರ್ಗ 1ನ್ನು 95 ರಿಂದ 147ಕ್ಕೆ ಹಿಗ್ಗಿಸಿ ಎರಡು ಪ್ರವರ್ಗ ಸೃಷ್ಟಿಸಿದ್ದು, ಪ್ರವರ್ಗ 1-ಎ ಗೆ ಕೆನೆಪದರ ನೀತಿ ಬೇಕು. ಇಲ್ಲದಿದ್ದರೆ ಮೀಸಲಾತಿ ಸೌಲಭ್ಯ ಪಡೆದವರೇ ಪಡೆದು ಮುಂದುವರೆಯುತ್ತಾರೆ. ಜಾತಿಯಲ್ಲಿನ ಹಿಂದುಳಿದವರು ಹಾಗೆಯೇ ಮುಂದುವರೆಯುತ್ತಾರೆ ಎಂದು ಶಿಫಾರಸಿನಲ್ಲಿ ತಿಳಿಸಿದೆ.

ಹಿಂದುಳಿದ ವರ್ಗದ ವಿವಿಧ ಜಾತಿಗಳ ಜನಸಂಖ್ಯೆ

ಪ್ರವರ್ಗ -1ಎ - 34.96 ಲಕ್ಷ

ಗೊಲ್ಲ - 4,42,524

ಕಾಡುಗೊಲ್ಲ - 3,10,393

ಬೆಸ್ತ- 3,99,383

ಅಂಬಿಗ- 1,34,230

ಗಂಗಾಮತ - 73,627

ಕಬ್ಜೇರ್‌, ಕಬ್ಜೇರ- 58,289

ಕಬ್ಬಲಿಗ- 3,88,082

ಮೊಗವೀರ- 1,21,478

ಉಪ್ಪಾರ - 7,58,605

ಪಿಂಜಾರ- 1,11,805

ಪ್ರವರ್ಗ-1ಬಿ (7392 ಲಕ್ಷ)

ಕುರುಬ ಮತ್ತು ಉಪಜಾತಿ - 43,72,847

ಕುರುಬ- 42,71,399

ಸವಿತಾ- 33,355

ಭಜಂತ್ರಿ- 1,01,728

ಭಂಡಾರಿ - 41,775

ಹಡಪದ- 94,574

ಹೂಗಾರ್‌/ಹುಗಾರ್‌-50,077

ಮಾಲಿ/ಮಾಳಿ- 83,296

ಕುಲಾಲ- 74,197

ಬೋವಿ- 64,140

ಯಾದವ- 67,754

ಚೆಟ್ಟಿಯಾರ್‌- 13,557

ಸಾಧು ಶೆಟ್ಟಿ- 10,309

ಗ್ರಾಮ ಒಕ್ಕಲು/ವಕ್ಕಲ್- 36,170

ಹಾಲಕ್ಕಿ ಒಕ್ಕಲು/ ಹಾಲಕ್ಕಿ ಒಕ್ಕಲ್‌- 73,977

ಕರೆ ಒಕ್ಕಲು, ಕರೆ ವಕ್ಕಲ್- 24,916

ಕ್ರೈಸ್ತರಾಗಿ ಮತಾಂತರವಾದ ಪ.ಜಾ- 12,865

ಪ್ರವರ್ಗ-2-ಎ (77.78 ಲಕ್ಷ)

ದೇವಾಡಿಗ- 1,04,571

ಈಡಿಗ- 3,50,603

ಬಿಲ್ಲವ- 4,85,628

ಪೂಜಾರಿ - 1,15,081

ದೀವರ್‌/ದೀವರು- 63,559

ನಾಮಧಾರಿ- 2,16,619

ವಕ್ಷಿಕುಲ ಕ್ಷತ್ರಿಯ- 33,516

ಗೌಂಡರ್‌- 1,03,125

ವಿಶ್ವಕರ್ಮ- 6,86,428

ದೈವಜ್ಞ ಬ್ರಾಹ್ಮಣ: 80,155

ಗಾಣಿಗ: 6,86,428

ಬೌದ್ಧರು: 6,86,428

ಕುರುಹಿನಸೆಟ್ಟಿ: 1,53,195

ಪ್ರವರ್ಗ-2ಬಿ (75.25 ಲಕ್ಷ)

ಮುಸ್ಲಿಮರು ಮತ್ತು ಉಪಜಾತಿ: 75,25,880

* ಪ್ರವರ್ಗ -3ಎ (72.99 ಲಕ್ಷ)

ಒಕ್ಕಲಿಗ ಮತ್ತು ಉಪಜಾತಿ: 61,58,352

ಒಕ್ಕಲಿಗ- 40,04,830

ಗೌಡ ಒಕ್ಕಲಿಗ- 1,84,479

ಕುಂಚಿಟಿಗ ವಕ್ಕಲಿಗ: 41,188

ವಕ್ಕಲ್/ವಕ್ಕಲಿಗ- 1,88,508

ಗಂಗಡಕರ್‌ ಒಕ್ಕಲಿಗ- 82,589

ದಾಸ್‌ ಒಕ್ಕಲಿಗ- 17,961

ರೆಡ್ಡಿ ಒಕ್ಕಲಿಗ- 24,059

ಮರಸು ಒಕ್ಕಲಿಗ-3,859

ರೆಡ್ಡಿ: 4,15,382

ಕುಂಚಿಟಿಗ - 1,95,499

ಗೌಡ- 4,60,555

ಕಮ್ಮ- 1,11,739

ರಡ್ಡಿ- 2,87,372

ನಾಮಧಾರಿ ಗೌಡ: 21,468

ಬಲಿಜ- 2,03,347

ಬಲಜಿಗ- 1,37,828

ಬಣಜಿಗ- 2,96,411

ನಾಯ್ಡು - 1,50,601

*ಪ್ರವರ್ಗ 3ಬಿ (81.37 ಲಕ್ಷ)

ವೀರಶೈವ ಲಿಂಗಾಯತ - 10,49,706

ಲಿಂಗಾಯತ ಉಪಗುಂಪು- 66,35,233

ಬೇಡುವ ಜಂಗಮ- 89,868

ಲಿಂಗಾಯತ ಹಡಪದ: 21,104

ಲಿಂಗಾಯತ್‌ ಬಡಿಗ/ಬಡಿಗರ್‌: 26,887

ಲಿಂಗಾಯತ ವೀರಶೈವ: 2,22,395

ವೀರಶೈವ ಲಿಂಗಾಯತ - 2,22,395

ವೀರಶೈವ ಪಂಚಮಸಾಲಿ- 4,37,796

ಪಂಚಮಸಾಲ ಲಿಂಗಾಯತ- 6,33,506

ಆದಿ ಬಣಜಿಗ - 1,31,693

ಬಣಜಿಗ ಲಿಂಗಾಯತ - 43,423

ಜಂಗಮ ಲಿಂಗಾಯತ - 50,242

ಕುಡು ಒಕ್ಕಲಿಗ: 81,999 ಲಿಂಗವಂತ: 3,88,327

ಲಿಂಗಾಯತ್‌: 26,02,777

ರೆಡ್ಡಿ ಲಿಂಗಾಯತ: 33,606

ಸಾದರ ಲಿಂಗಾಯತ: 67,903

ವೀರಶೈವ: 1,01,019

ನೊಳಂಬ ಲಿಂಗಾಯತ್‌: 1,48,894

ಕ್ರಿಶ್ಚಿಯನ್‌ ಮತ್ತು ಉಪಜಾತಿ: 9,47,994

ಬಂಟ್‌: 3,19,113

ಪರಿವಾರ ಬಂಟ್: 3,258

ಜೈನ ದಿಗಂಬರರು: 1,62,566