ಜಾತಿ ಜಾತಿಗಳ ನಡುವೆ ಎತ್ತಿ ಕಟ್ಟಲು ಜಾತಿಗಣತಿ ವರದಿ ಸಿದ್ಧಪಡಿಸಲಾಗಿದೆ: ಸಿ.ಟಿ. ರವಿ ಆರೋಪ
Mar 02 2024, 01:45 AM ISTಹಿಂದೂ ಭಾವನೆಯಲ್ಲಿ ಜನ ಮತ ಹಾಕಬಾರದು ಎಂಬ ರಾಜಕೀಯ ಸಂಚಿನ ಭಾಗವಾಗಿ ಈ ವರದಿ ನೀಡಿದ್ದು, ಕಾಂಗ್ರೆಸ್ ಟೂಲ್ ಕಿಟ್ ನ ಭಾಗವಾಗಿ ಈ ವರದಿ ಇದೆ. ಜಾತಿ ಗಣತಿ ವಿಚಾರದಲ್ಲಿ ಕಾಂಗ್ರೆಸ್ ಮಗುವನ್ನು ತೂಗೋ ಕೆಲಸ ಮತ್ತು ಚಿವುಟೋ ಕೆಲಸ ಎರಡನ್ನೂ ಮಾಡುತ್ತಿದೆ. ವರದಿ ವಿಚಾರವಾಗಿ ಕಾಂಗ್ರೆಸ್ ನಲ್ಲಿ ಒಬ್ಬೊಬ್ಬರು ಒಂದೊಂದು ನಿಲುವು ಹೊಂದಿದ್ದು, ವರದಿ ವಿಚಾರದಲ್ಲಿ ಮುಖ್ಯಮಂತ್ರಿ ನಡೆಯನ್ನು ಒಪ್ಪದವರು ರಾಜೀನಾಮೆ ಕೊಟ್ಟು ಹೊರ ಬರಲಿ, ಅದನ್ನು ಬಿಟ್ಟು ನಾಟಕ ಆಡುವುದು ಬೇಡ.