ದರ್ಶನ್ ಗೆ ಜಾಮೀನು ವಿಳಂಬ, ಮಾಡಿದ ಪಾಪ ಕಳೆಯಬೇಕಿದೆ: ಕೋಡಿಶ್ರೀ ಭವಿಷ್ಯ
Oct 17 2024, 12:57 AM ISTರಾಜ್ಯ ಹಾಗೂ ದೇಶದಲ್ಲಿ ಇನ್ನೂ ಮಳೆ ಹೆಚ್ಚಾಗಲಿದೆ. ದೊಡ್ಡ ದೊಡ್ಡ ನಗರ ಹಾಗೂ ರಸ್ತೆಗಳು ಜಲಾವೃತವಾಗಲಿವೆ, ಪ್ರಾಣಿ ಸಂಕುಲಕ್ಕೆ ಅಪಾಯ ಆಗುವ ಸಂಭವವಿದೆ, ವಿಶೇಷವಾಗಿ ಕಾಲಭೈರವ ಅಸಂತೋಷಗೊಂಡಿದ್ದು, ಅವನ ಕುಲ ಶ್ವಾನಗಳು ಜನರಿಗೆ ಬಹಳ ತೊಂದರೆ ಕೊಡುತ್ತಿವೆ. ಶ್ವಾನಗಳಿಗೆ ಊಟ ಹಾಕುವುದರ ಮೂಲಕ ಕಾಲಭೈರವನ ಶಾಂತಿ ಮಾಡಬೇಕಿದೆ. ಭೂಮಿಯಿಂದ ಜೀವಜಲ ಉಕ್ಕಲಿದೆ, ಪ್ರಾಣಿಗಳು ಕಾಡಿನಿಂದ ನಾಡಿನತ್ತ ಬರಲಿದ್ದು, ಜನ ಎಚ್ಚರದಿಂದ ಇರಬೇಕು.