ಅಸಮರ್ಪಕ ನೀರು ಪೂರೈಕೆಗೆ ಆಕ್ರೋಶ
Oct 31 2023, 01:15 AM ISTನಗರದ ವಿಶ್ವೇಶ್ವರಯ್ಯ ಜಲ ನಿಗಮದ ಕಚೇರಿ ಮುಂದೆ ಸೋಮವಾರ ಬಿದರಕೆರೆ, ಕುರುಬರಹಳ್ಳಿ, ಅಗಳೇರಹಟ್ಟಿ ಭಾಗದ ನೂರಾರು ರೈತರು ಸಮರ್ಪಕವಾಗಿ ನೀರು ಹರಿಸಿಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.ಈ ವೇಳೆ ರೈತ ಪೂಜಾರ್ ಹನುಮಂತಪ್ಪ ಮಾತನಾಡಿ, ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶಕ್ಕೆ ಹರಿಸುತ್ತಿರುವ ನೀರಿನ ನಿರ್ವಹಣೆ ಬಗ್ಗೆ ರೈತರಿಗೆ ಅಸಮಾಧಾನವಿದೆ. ಕಾಲುವೆಗಳನ್ನು ಅಚ್ಚುಕಟ್ಟು ಮಾಡದೇ ನೀರು ಹರಿಸುತ್ತಿದ್ದು, ಕೊನೆಭಾಗದ ಬಿದರಕೆರೆಗೆ ನೀರು ಹರಿಯಲೇ ಇಲ್ಲ. ಸುಮಾರು 80-90 ಎಕರೆ ತೋಟಗಳು ನೀರಿಲ್ಲದಂತಾಗಿವೆ. ಕೆಳಗಿನ ಜಮೀನುಗಳಿಗೆ ನೀರು ಪೂರೈಕೆಯಾದ ನಂತರ ಮೇಲ್ಭಾಗದವರಿಗೆ ನೀರು ಹರಿಸುವುದು ವಾಡಿಕೆ.