ನುಗು ಬಲದಂಡೆ, ಎಡದಂಡೆ, ಮೇಲ್ದಂಡೆ ನಾಲೆಗಳಿಗೆ ನೀರು ಸರಬರಾಜು
Aug 03 2025, 01:30 AM IST2025ರ ಖಾರೀಫ್ ಬೆಳೆಗಳಿಗೆ ನುಗು ಜಲಾಶಯ ಯೋಜನೆಯ ಕೆಳಗೆ ಬರುವ ನುಗು ಬಲದಂಡೆ ಮತ್ತು ನುಗು ಎಡದಂಡೆ ನಾಲೆಗಳ ಅಚ್ಚುಕಟ್ಟಿನ ಜಮೀನಿಗಳಿಗೆ ಬಿಡುವ ಕಟ್ಟು ನೀರಿನ ವಿವರ- ಜು.30 ರಿಂದ ಸೆ.8, ಸೆ.16 ರಿಂದ 22, ಸೆ.30 ರಿಂದ ಅ.6, ಅ.14 ರಿಂದ 20, ಅ.28 ರಿಂದ ನ.3, ನ.11 ರಿಂದ 17, ನ.25 ರಿಂದ ಡಿ.1, ಡಿ.9 ರಿಂದ 15 ರವರೆಗೆ ನೀರನ್ನು ಸರಬರಾಜು ಮಾಡಲಾಗುತ್ತದೆ ಎಂದು ನಂಜನಗೂಡು ಕಬಿನಿ ನಾಲೆಗಳ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ನುಗು ನೀರಾವರಿ ಸಲಹಾ ಸಮಿತಿಯ ಸದಸ್ಯ ಕಾರ್ಯದರ್ಶಿ ಎಚ್.ವಿ. ಮಧುಸೂದನ್ ತಿಳಿಸಿದ್ದಾರೆ.