ಲಿಂಗನಮಕ್ಕಿ ಬಹುತೇಕ ಭರ್ತಿ: ನೀರು ಹೊರಕ್ಕೆ
Aug 20 2025, 01:30 AM ISTಶರಾವತಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ 48393 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ನೀರಿನ ಮಟ್ಟ 1816.2ಕ್ಕೆ ಏರಿಕೆಯಾಗಿದ್ದು, 142.39 ಟಿಎಂಸಿ ನೀರು ಸಂಗ್ರಹಣೆಗೊಂಡಿದೆ. ಲಿಂಗನಮಕ್ಕಿ ಅಣೆಕಟ್ಟೆ ಬಹುತೇಕ ಭರ್ತಿಯಾದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಜಲಾಶಯದ 11 ರೇಡಿಯಲ್ ಗೇಟ್‍ಗಳನ್ನು ತೆರೆದು ಸುಮಾರು 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗಿದೆ.