ಪ್ರಧಾನಿ ನರೇಂದ್ರ ಮೋದಿ ಆ.21ರಿಂದ ಮೂರು ದಿನಗಳ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಮೋದಿ ಆ.21ಕ್ಕೆ ಪೋಲೆಂಡ್ಗೆ ಮತ್ತು ಆ.23ರಂದು ಯುದ್ಧಪೀಡಿತ ಉಕ್ರೇನ್ ದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.
‘40 ಕೋಟಿ ಜನರು ಒಟ್ಟಾಗಿ ಜಗತ್ತಿನ ಬಲಾಢ್ಯ ದೇಶದ ವಿರುದ್ಧ ಹೋರಾಡಿ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡಲು ಸಾಧ್ಯವಾಗಿದ್ದರೆ, 140 ಕೋಟಿ ಜನರು ಒಟ್ಟಾಗಿ 2047ಕ್ಕೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ಸಾಧ್ಯವಿಲ್ಲವೇ?’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಜಗತ್ತಿನ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಗಣ್ಯರಾಗಿ ಹೊರಹೊಮ್ಮಿದ್ದಾರೆ. ‘ಮಾರ್ನಿಂಗ್ ಕನ್ಸಲ್ಟೆಂಟ್’ ಸಂಸ್ಥೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಶೇ.69ರಷ್ಟು ಅನುಮೋದನೆ ಮೂಲಕ ಮೋದಿ ಅಗ್ರಸ್ಥಾನ ಪಡೆದಿದ್ದಾರೆ.