ಸಿದ್ದಾಪುರದಲ್ಲಿ ಬಾಣಂತಿ ಸಾವು: ಸರ್ಕಾರಿ ಆಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ
Nov 09 2024, 01:18 AM ISTಹಾರ್ಸಿಕಟ್ಟಾ ಸಮೀಪದ ಕೊಣೆಗದ್ದೆಯ ಜ್ಯೋತಿ ರವಿ ನಾಯ್ಕ (೩೬) ಮೃತಪಟ್ಟ ಮಹಿಳೆ. ನ. ೫ರಂದು ತಾಲೂಕು ಆಸ್ಪತ್ರೆಯ ವೈದ್ಯರು ಜ್ಯೋತಿ ಅವರಿಗೆ ಸಿಜೆರಿಯನ್ ಮೂಲಕ ಹೆರಿಗೆ ಮಾಡಿಸಿದ್ದರು. ನಂತರ ರಕ್ತಸ್ರಾವ ಹೆಚ್ಚಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕಳುಹಿಸಲಾಗಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಗ್ಗೆ ಜ್ಯೋತಿ ಮೃತಪಟ್ಟಿದ್ದಾರೆ.