ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ನಾಲ್ವರ ಬಂಧನ
Mar 30 2024, 12:46 AM ISTಮಳವಳ್ಳಿ ಪಟ್ಟಣದ ಕೀರ್ತಿನಗರದ ಪ್ರಜ್ವಲ್ (21), ಕಾರ್ತಿಕ್ (20) ಹಾಗೂ ಸಿದ್ಧಾರ್ಥ ನಗರದ ಕಿಶೋರ್ (20) ಬಂಧಿತ ಆರೋಪಿಗಳು. ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ ಆರೋಪದಡಿ ಕೋಟೆ ಬೀದಿಯ 17 ವರ್ಷದ ಬಾಲಕನನ್ನು ಬಂಧಿಸಲಾಗಿದೆ. ಕೀರ್ತಿನಗರದ ಬಡಾವಣೆಯ 15 ವರ್ಷದ ಬಾಲಕಿಯು ಕಳೆದ ತಿಂಗಳು ಅದೇ ಬಡಾವಣೆಯ ಸ್ನೇಹಿತೆಯ ಮನೆಗೆ ಹೋಗಿ ಬರುತ್ತಿದ್ದ ವೇಳೆ ಆರೋಪಿ ಪ್ರಜ್ವಲ್ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ.