ಬಾನು ಮುಷ್ತಾಕ್ ದಸರಾ ಉದ್ಘಾಟಿಸಲು ಬಿಜೆಪಿ ವಿರೋಧ ಸರಿಯಲ್ಲ
Sep 04 2025, 01:00 AM IST೨೦೧೭ರಲ್ಲಿ ಕವಿ ನಿಸಾರ್ ಅಹಮ್ಮದ್ ದಸರಾ ಉದ್ಘಾಟನೆ ನಡೆಸಿದ್ದರು. ಆಗ ಯಾವುದೇ ಆಕ್ಷೇಪ ಹೊರಹಾಕದ ಬಿಜೆಪಿ ನಾಯಕರು, ಈಗ ಮಾತ್ರ ವಿರೋಧ ವ್ಯಕ್ತಪಡಿಸುತ್ತಿರುವುದು ದ್ವಂದ್ವ ನಿಲುವಾಗಿದೆ. ಬಾನು ಮುಷ್ತಾಕ್ ಮುಸ್ಲಿಂ ಸಮಾಜದವರು ಎಂಬ ಕಾರಣಕ್ಕೆ ಬಿಜೆಪಿಯವರು ವಿರೋಧಿಸುತ್ತಾರೆಯೇ? ತಾಯಿ ಚಾಮುಂಡಿ ದೇವಿಯನ್ನು ಬಿಜೆಪಿ ಗುತ್ತಿಗೆ ಪಡೆದಿದೆಯೇ? ಬೇರೆ ಧರ್ಮದವರು ಉದ್ಘಾಟನೆ ನಡೆಸಬಾರದು ಎಂಬ ಪ್ರತಾಪ್ ಸಿಂಹ ಅವರ ನಿಲುವು ಹೇಗೆ ನ್ಯಾಯಸಮ್ಮತ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಅದೇ ಸಮಯದಲ್ಲಿ, ಬಾನು ಮುಸ್ತಾಕ್ ಪ್ರಶಸ್ತಿ ಗೆದ್ದಾಗ ಅಭಿನಂದನೆ ಸಲ್ಲಿಸಿದ ಸಂಘಟನೆಗಳು ಮತ್ತು ಪ್ರಗತಿಪರ ಚಿಂತಕರು ಈಗ ಮೌನವಾಗಿರುವುದು ಅನುಮಾನ ಹುಟ್ಟಿಸುತ್ತದೆ ಎಂದರು.