ಕೇಂಬ್ರಿಡ್ಜ್ ಶಾಲೆಗೆ ಬೀಗ, ಶಾಲೆ ಆರಂಭಿಸುವಂತೆ ಮಕ್ಕಳ ಪೋಷಕರ ಪ್ರತಿಭಟನೆ
Dec 10 2024, 12:30 AM ISTತಾಲೂಕಿನ ವಿವಿಧ ಗ್ರಾಮಗಳಿಂದ ಮಕ್ಕಳನ್ನು ಕೇಂಬ್ರಿಡ್ಜ್ ಶಾಲೆಗೆ ಸೇರಿಸಲಾಗಿದೆ. ಸುಮಾರು 800ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಗೆ ಏಕಾಏಕಿ ಬೀಗ ಹಾಕಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ಇದ್ದಕ್ಕಿದ್ದಂತೆ ಶಾಲೆ ಮುಚ್ಚಿದ್ದು, ಶಾಲಾ ಆಡಳಿತದಿಂದ ಮೂರು ದಿನಗಳಿಗೊಮ್ಮೆ ಒಂದೆರಡು ದಿನಗಳಲ್ಲಿ ಶಾಲೆ ತೆರೆಯುವುದಾಗಿ ಮೆಸೆಜ್ ಮಾಡುತ್ತಿದ್ದಾರೆ ವಿನಃ ಶಾಲೆ ಆರಂಭಗೊಂಡಿಲ್ಲ.