ಬಾಡಿಗೆ ಕಟ್ಟದ ವಾಣಿಜ್ಯ ಮಳಿಗೆಗಳಿಗೆ ಪುರಸಭೆಯಿಂದ ಬೀಗ
Sep 01 2024, 01:50 AM ISTಬಾಡಿಗೆ ವಸೂಲಿ ಮಾಡಿ ಅಥವಾ ಅಮಾನತಿಗೆ ಸಿದ್ಧರಾಗಿ ಎಂಬ ಜಿಲ್ಲಾಧಿಕಾರಿಗಳ ಆದೇಶದಿಂದ ಬೆದರಿದ ಪುರಸಭೆ ಅಧಿಕಾರಿಗಳು ಶುಕ್ರವಾರ ಹಾಗೂ ಶನಿವಾರ ಕಾರ್ಯಾಚರಣೆ ನಡೆಸಿ ಹೇಮಾವತಿ ಸಂಕೀರ್ಣದಲ್ಲಿನ ಎರಡು ಅಜಾದ್ ರಸ್ತೆಯಲ್ಲಿ ೧೦ನೇ ಹಣಕಾಸು ಯೋಜನೆಯಡಿ ನಿರ್ಮಿಸಿದ್ದ ಐದು ಮಳಿಗೆಗಳಿಗೆ ಬೀಗ ಹಾಕಲಾಯಿತು. ಈ ಐದು ಮಳಿಗೆಗಳಿಂದ ೨೦ ಲಕ್ಷ ಬಾಡಿಗೆ ಬಾಕಿ ಇದ್ದು ಒಳಬಾಡಿಗೆ ನೀಡುವ ಮೂಲಕ ಬಾಡಿಗೆದಾರರಿಗೆ ಹಾಗೂ ಪುರಸಭೆಗೆ, ಪುರಸಭೆ ಮಾಜಿ ಅಧ್ಯಕ್ಷರೊಬ್ಬರು ವಂಚಿಸಿದ್ದಾರೆ ಎಂಬ ಆರೋಪ ಮಳಿಗೆಗಳಿಗೆ ಬೀಗ ಹಾಕುವ ವೇಳೆ ಕೇಳಿ ಬಂದಿತ್ತು. ಪುರಸಭೆಗೆ ಸೇರಿದ ೧೪೦ ಮಳಿಗೆಗಳಿದ್ದು, ೮೯ ಲಕ್ಷ ಬಾಡಿಗೆ ಬಾಕಿ ಇದೆ. ಎರಡು ದಿನಗಳ ಕಾರ್ಯಾಚರಣೆಯಲ್ಲಿ ೧೫ ಲಕ್ಷ ರು. ವಸೂಲಾತಿಯಾಗಿದೆ.