ನರ್ಸ್ಗಳ ಕೊರತೆ ಕಾರಣ ನೀಡಿ ಮಿಮ್ಸ್ ಐಸಿಯು ಘಟಕಕ್ಕೆ ಬೀಗ..!
Feb 10 2025, 01:45 AM ISTಮಿಮ್ಸ್ ಆಸ್ಪತ್ರೆಗೆ ಕೋವಿಡ್ ವೇಳೆ ಹೊಂಬಾಳೆ ಗ್ರೂಪ್ಸ್ನವರು ಸುಮಾರು ಒಂದೂವರೆ ಕೋಟಿ ರು. ಖರ್ಚು ಮಾಡಿ ಎರಡು ವಾರ್ಡ್ಗಳಿಗೆ ಐಸಿಯು ಘಟಕ ನಿರ್ಮಿಸಿ ದಾನವಾಗಿ ಕೊಟ್ಟಿದ್ದರು. ಕೋವಿಡ್ ವೇಳೆ ಶ್ವಾಸಕೋಶ, ಉಸಿರಾಟ ಮತ್ತು ಹೃದಯ ಸಂಬಂಧಿ ರೋಗಿಗಳಿಗಾಗಿ ಈ ವಾರ್ಡ್ಗಳು ಬಳಕೆಯಾಗುತ್ತಿತ್ತು. ಆದರೆ, ದಾನವಾಗಿ ಬಂದ ಕೋಟ್ಯಂತರ ರು. ಮೌಲ್ಯದ ಉಪಕರಣಗಳೂ ಸಹ ಧೂಳು ಹಿಡಿಯುತ್ತಿವೆ.