ತ್ರಿರಾಜ್ಯಗಳಲ್ಲಿ ಬಿಜೆಪಿ ಗೆಲುವು ಹಿನ್ನೆಲೆ ಬಿಜೆಪಿ ಬೈಕ್ ರ್ಯಾಲಿ
Dec 06 2023, 01:15 AM ISTಮುಂದಿನ ಲೋಕಸಭಾ ಚುನಾವಣೆಯಲ್ಲೂ ದೇಶದ ಮತದಾರರು ಬಿಜೆಪಿ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತರಲಿದ್ದಾರೆ. ಪ್ರಧಾನಿ ಮೋದಿ ಅವರನ್ನು ಕ್ಷುಲ್ಲಕ ಕಾರಣಗಳಿಗೆ ಹೀಗಳೆಯುವ ಕಾಂಗ್ರೆಸ್‌ನವರಿಗೆ ದೇಶದ ಜನತೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿದ್ದಾರೆ. ಮುದ್ರಾ ಯೋಜನೆ, ಪ್ರಧಾನ ಮಂತ್ರಿ ಗೃಹ ಯೋಜನೆ, ಶೌಚಾಲಯ, ಮಂಗಳಯಾನ ಸೇರಿದಂತೆ ಪ್ರಧಾನಿಯವರು ಎಷ್ಟೇ ಒಳ್ಳೆ ಕೆಲಸ ಮಾಡಿದರೂ ಅದನ್ನು ಹೀಯಾಳಿಸುವ ಕೆಲಸ ಕಾಂಗ್ರೆಸ್‌ನವರದಾಗಿದೆ. ಇದೇ ಮನಸ್ಥಿತಿ ಮುಂದುವರಿಸಿದಲ್ಲಿ ದೇಶದಿಂದ ಕಾಂಗ್ರೆಸ್ ನಿರ್ನಾಮಕ್ಕೆ ಜನರೇ ಮುಂದಾಗುತ್ತಾರೆ ಎಂದು ಹೇಳಿದರು.