‘ಬಾಂಗ್ಲಾದೇಶದಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರಾದ ಹಿಂದೂಗಳು ಯಾವುದೇ ಕಾರಣವಿಲ್ಲದೇ ಹಿಂಸಾಚಾರಕ್ಕೆ ಒಳಗಾಗುತ್ತಿದ್ದಾರೆ. ಅವರು ಯಾವುದೇ ರೀತಿಯ ಅನ್ಯಾಯ, ದೌರ್ಜನ್ಯಗಳನ್ನು ಎದುರಿಸಿದಂತೆ ಭಾರತ ಅವರ ಹಿತವನ್ನು ಕಾಪಾಡಬೇಕು’ ಎಂದು ಆರ್‌ಎಸ್‌ಎಸ್ ಮಖ್ಯಸ್ಥ ಮೋಹನ್ ಭಾಗವತ್ ಕರೆ ಕೊಟ್ಟಿದ್ದಾರೆ.
ಇಂದು ಅಯೋಧ್ಯೆಯಲ್ಲಿ ರಾಮಲಲ್ಲಾ ವಿರಾಜಮಾನನಾಗಿದ್ದಾನೆ. ಜೊತೆಗೆ, ಭಾರತದ ಹೆಮ್ಮೆಯೂ ಮರಳಿದೆ. ಇಂದಿನ ಕಾರ್ಯಕ್ರಮವು, ದೇಶವು ದುರಂತಗಳಿಂದ ಜಗತ್ತಿಗೆ ಪರಿಹಾರ ನೀಡುವ ‘ನವ ಭಾರತ’ವಾಗಿ ಖಂಡಿತವಾಗಿಯೂ ಹೊರಹೊಮ್ಮುತ್ತದೆ ಎಂಬುದರ ಸಂಕೇತವಾಗಿದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಹೇಳಿದರು.