ಅಡ್ವಾಣಿಯವರಿಗೆ ಭಾರತ ರತ್ನ ಕೊಟ್ಟಿದ್ದರಲ್ಲಿ ತಪ್ಪಿಲ್ಲ: ಸಚಿವ ಆರ್.ಬಿ. ತಿಮ್ಮಾಪುರ
Feb 04 2024, 01:32 AM ISTಬಾಗಲಕೋಟೆ: ಅಡ್ವಾಣಿ ಅವರು ಹಿರಿಯ ನಾಯಕ, ಭಾರತ ರತ್ನ ಕೊಟ್ಟಿದ್ದರಲ್ಲಿ ಏನೂ ತಪ್ಪಿಲ್ಲ, ಎಲೆಕ್ಷನ್ ಸಮಯದಲ್ಲಿ ಇಂತವೆಲ್ಲಾ ಮಾಡುತ್ತಾರೆ. ಅವರು(ಬಿಜೆಪಿ) ಏನೋ ಪರಿಗಣಿಸಿ ಕೊಟ್ಟಿರುತ್ತಾರೆ. ಅದು ನನ್ನ ಗಮನಕ್ಕೆ ಇಲ್ಲ, ನನಗೇನೂ ಗೊತ್ತಿಲ್ಲ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್.ಕೆ. ಅಡ್ವಾಣಿ ಅವರಿಗೆ ಭಾರತ ರತ್ನ ಕೊಟ್ಟು ಸಮಾಧಾನ ಮಾಡಲಾಗುತ್ತಿದೆಯಾ ಎಂಬ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.