ಭಾರತೀಯ ಷೇರುಪೇಟೆ ಬಜೆಟ್ ಬಗ್ಗೆ ನೀರಸವಾಗಿ ಪ್ರತಿಕ್ರಿಯಿಸಿದೆ. ಹೂಡಿಕೆದಾರರಿಗೆ ಬಜೆಟ್ನಲ್ಲಿ ಯಾವುದೇ ಪೂರಕ ಅಂಶ ಕಂಡುಬರದ ಕಾರಣ ಷೇರುಪೇಟೆ ಭಾರೀ ಕುಸಿತದ ಭೀತಿಗೆ ತುತ್ತಾಗಿದ್ದರೂ, 12 ಲಕ್ಷ ರು.ವರೆಗಿನ ಆದಾಯಕ್ಕೆ ತೆರಿಗೆ ಇಲ್ಲ ಎಂಬ ಸಮಾಧಾನಕರ ಅಂಶ ಷೇರುಪೇಟೆಯ ಭಾರೀ ಕುಸಿತವನ್ನು ತಡೆದಿದೆ.
ಶ್ರೀಹರಿಕೋಟದ ಎರಡನೇ ಉಡ್ಡಯನ ಕೇಂದ್ರದಿಂದ ಬೃಹತ್ ಜಿಎಸ್ಎಲ್ವಿ ರಾಕೆಟ್ ಆಗಸಕ್ಕೇರಿ 2ನೇ ತಲೆಮಾರಿನ ನಾವಿಕ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಯಲ್ಲಿ ಕೂರಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ತನ್ನ 100ನೇ ಉಡ್ಡಯನದ ಇತಿಹಾಸ ಬರೆಯಿತು.
ಪ್ರಜಾಪ್ರಭುತ್ವದ ಹಬ್ಬಕ್ಕೆ ಭಾರತೀಯ ಸೇನೆ ಸಜ್ಜು । ದೆಹಲಿಯ ಕರ್ತವ್ಯ ಪಥದಲ್ಲಿ ನಾಳೆ ಭಾರತದ ಪರಂಪರೆ, ಶೌರ್ಯ, ಪ್ರಗತಿಯ ಅನಾವರಣ
ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷ ಗಾದಿಗೇರುತ್ತಿದ್ದಂತೆ ಅಮೆರಿಕದಲ್ಲಿರುವ ಭಾರತೀಯರು ಆದಷ್ಟು ಬೇಗ ಮಕ್ಕಳನ್ನು ಹೆರಲು ಹವಣಿಸುತ್ತಿದ್ದಾರೆ. ಇದಕ್ಕೆ ಕಾರಣ, ಟ್ರಂಪ್ರ ‘ಜನ್ಮಸಿದ್ಧ ಪೌರತ್ವ ಹಕ್ಕು’ ರದ್ದತಿ ನಿರ್ಧಾರ!