ಭಾರತೀಯ ಸಂಸ್ಕೃತಿಯು ಕಲೆಯನ್ನು ಉಳಿಸುತ್ತಿದೆ
Jun 22 2025, 01:18 AM ISTಬೆಂಗಳೂರಿನ ಜಿಲ್ಲಾ ನ್ಯಾಯಾಧೀಶರಾದ ಗಣಪತಿ ಗುರುಸಿದ್ಧ ಬಾದಾಮಿ ಮಾತನಾಡಿ, ೨೦೧೭ರಲ್ಲಿ ಸ್ಥಾಪಿತವಾದ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿಯಲ್ಲಿ ವಿಶ್ವದಾದ್ಯಂತ ೨೪ ಸಾವಿರ ಕಲಾವಿದರ ಸದಸ್ಯತ್ವವನ್ನು ಹೊಂದಿದೆ. ಶಾಸ್ತ್ರೀಯ ನೃತ್ಯಗಳನ್ನು ಪ್ರೋತ್ಸಾಹಿಸಿ ಬೆಳೆಸುವ ಉದ್ದೇಶದಿಂದ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನಮಾನ ಹೊಂದಿರುವ ೮ ವಿಧದ ಶಾಸ್ತ್ರೀಯ ನೃತ್ಯಗಳನ್ನು ಒಂದೆಡೆಗೆ ಸೇರಿಸಿ ನೃತ್ಯವನ್ನು ಕಲಿಯುತ್ತಿರುವ, ಕಲಿತಿರುವ ವೇದಿಕೆ ವಂಚಿತ ಕಲಾವಿದರಿಗಾಗಿ ಇಂತಹ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.