ಭ್ರಷ್ಟಾಚಾರ ನಿರ್ಮೂಲನೆಗೆ ಮಾಹಿತಿ ಹಕ್ಕು ಕಾಯ್ದೆ ಬ್ರಹ್ಮಾಸ್ತ್ರ: ಹೇಮಂತ ನಾಗರಾಜ
Feb 12 2024, 01:30 AM ISTಭ್ರಷ್ಟಾಚಾರದಿಂದ ಕೂಡಿರುವ ಸಮಾಜದಲ್ಲಿ ಸರ್ಕಾರಿ ಕೆಲಸ, ಕಾರ್ಯಗಳು ಯಾವ ರೀತಿ ಆಗುತ್ತಿವೆ, ಸರ್ಕಾರದಿಂದ ಮಂಜೂರಾದ ಅನುದಾನ ಸದ್ಭಳಕೆಯಾಗುತ್ತಿದೆಯೇ ಇಲ್ಲವೇ, ಸಾರ್ವಜನಿಕರ ತೆರಿಗೆ ಹಣ ಯಾರ ಪಾಲಾಗುತ್ತಿದೆ ಹೀಗೆ ಎಲ್ಲಾ ಹಗರಣ, ಭ್ರಷ್ಟಾಚಾರ, ಅನ್ಯಾಯವನ್ನು ಬಯಲಿಗೆಳೆಯಲು ಮಾಹಿತಿ ಹಕ್ಕು ಕಾಯ್ದೆಯು ಪರಿಣಾಮಕಾರಿಯಾಗಿದೆ. ಇಂತಹ ಕಾಯ್ದೆ ಸದ್ಭಳಕೆಯಾದಾಗ ಮಾತ್ರ ಕಾಯ್ದೆ ಜಾರಿಗೊಳಿಸಿದ್ದೂ ಸಾರ್ಥಕವಾಗುತ್ತದೆ.