ಮತ್ತೆ ಅಬ್ಬರಿಸಿದ ಮಳೆ, ಮನೆಗಳು ಜಲಾವೃತ
Aug 02 2024, 12:48 AM ISTಕದ್ರಾ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿದ್ದರಿಂದ ಕದ್ರಾ ಜಲಾಶಯದ ಎಲ್ಲ 10 ಗೇಟ್ ಗಳನ್ನು ತೆಗೆದು 67 ಸಾವಿರ ಕ್ಯುಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಹಾಗೂ ನಿರಂತರವಾಗಿ ನೀರು ಹರಿಸಲಾಗುತ್ತಿದೆ. ಇದರಿಂದ ಕದ್ರಾ ಜಲಾಶಯದ ನದಿ ಪಾತ್ರ, ತಗ್ಗು ಪ್ರದೇಶ, ಮಲ್ಲಾಪುರ ಸೇರಿದಂತೆ ವಿವಿಧ ಗ್ರಾಮಗಳ ಜನರಲ್ಲಿ ಈಗ ಮುಳಗಡೆ ಭೀತಿ ಸೃಷ್ಟಿಯಾಗಿದೆ.